ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Monday, 13 October 2014

ನಾನು ನನ್ನ ಕಣ್ಣಾರೆ ನೋಡಿದ್ದು...ಕೇಳಿದ್ದು ಇದು ನನ್ನ ಅನುಭವದ ಕಥನ...A Libya Experience - Part II

ತ್ರಿಪೋಲಿ, ಲಿಬಿಯ

ನನ್ನ ಪಾಲಿಗೆ ಎಂದಿಗೂ ಮರೆಯಲಾರದ ನೆನಪು. ಸುಂದರ ದೇಶ. ಮೆಡಟರೇನಿಯನ್ ವಾತಾವರಣ. ಇಟಲಿಯ ಪಡಿಯಚ್ಚು. ದೇಶ ಸೃಷ್ಠಿಯ ಅತ್ಯುತ್ತಮ ಕೊಡುಗೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಪ್ರಕ್ಷುಬ್ಧ ಮನಸ್ಸೂ ಮಂದಸ್ಮಿತವಾಗಬೇಕು. ಜನಸಾಮಾನ್ಯರು

ಸುಂದರ ಕಾಯದ ಜನರು. ಬಿಳಿ- ಕೆಂಪು ರಂಗಿನ, ಎತ್ತರ ಜನರು. ಪ್ಯಾಶನ್ ಪ್ರಿಯರು. ಸಾಮಾನ್ಯ ಜನರಿಗೂ ಎಲ್ಲಾ ಸೌಕರ್ಯಗಳು ಲಭ್ಯವಿದ್ದ ಕಾಲ. ಕಾರು, ಮನೆ, ಹೊಟ್ಟೆಗೆ ಬಟ್ಟೆಗೆ, ಶೋಪಿಂಗ್ ಯಾವುದಕ್ಕೂ ಕೊರತೆಯಿರಲಿಲ್ಲ.
ಅಸಂತೃಪ್ತರಂತೆ ಕಾಣಿಸುತ್ತಿರಲಿಲ್ಲ. ಅಲ್ಲಿನ ನಾಗರಿಕರಿಗೆ ಭತ್ಯೆ ಸಿಗುತ್ತಿತ್ತು. ರೋಟಿ, ಬ್ರೆಡ್, ಕುಬ್ಜಾಗಳನ್ನು ಖರೀದಿಸಲು ಸರಕಾರದಿಂದ ಕೂಪನ್ ಲಭ್ಯವಿತ್ತು. ನಾಗರಿಕರಿಗೆ ಪೆಟ್ರೋಲನ ಲಾಭಾಂಶದ ಹಣ ಬ್ಯಾಂಕನಲ್ಲಿ ಅವರವರ ಖಾತೆಗೆ ಜಮಾವಾಗುತ್ತಿತ್ತು. ಮನೆಯಿಲ್ಲದವರಿಗೆ ಸರಕಾರ ವಸತಿ ವ್ಯವಸ್ಥೆ ಮಾಡುತ್ತಿತ್ತು.
ವಿದ್ಯಾರ್ಥಿಗಳಿಗೆ ಉಚಿತ ವಿಧ್ಯಾಭ್ಯಾಸ, along with that, for their higher studies, Govt was providing stipend too.ಮನೆಯ ಮಾಲಿಕ ಮತ್ತು ಅಲ್ಲಿಯ ಕೆಲವು ನಾಗರಿಕರ ಮಾತು-

ನಮ್ಮ ಮನೆಯ ಮಾಲಿಕ  3 ಲಕ್ಷ ದಿನ್ನಾರಿನ ಬಂಗಲೆ, (ಅಂದರೆ ನಮಲ್ಲಿಯ 10 ಕೋಟಿ) ಜೊತೆಗೆ ಎರಡು ಅಪಾರ್ಟಮೆಂಟಿನ ಒಡೆಯ. .ಇವನು ಸರಕಾರದ ವಿರುದ್ಧದ ಜನಜಾತಿಯವನು. ಆದರೂ ಸಂತೋಷದಿಂದ ಇದ್ದವ. 90% ನಾಗರಿಕರು ಉತ್ತಮ ಸ್ಥಿಯಲ್ಲಿ ಇದ್ದಾರೆಂದು ಹೇಳಿದ್ದ.
ಯುದ್ಧದ ಅವಶ್ಯಕತೆ ಇರಲಿಲ್ಲ. ಸಮಾಜದಲ್ಲಿ ಕೆಲವು ಸುಧಾರಣೆಯ ಅಗತ್ಯವಿದೆ, ಹೀಗಾಗಿ ಕೆಲವೊಮ್ಮೆ ತಿಕ್ಕಾಟ ನಡೆಯುತ್ತಿರುತ್ತದೆ, ಯುದ್ಧ ನಡೆಯಯುವುದಿಲ್ಲ ಎನ್ನುವುದು ಅಲ್ಲಿಯ ನಾಗರೀಕರು ನಂಬಿದ್ದರು.ಗದ್ಧಾಫಿ

ಇವನು ಸಿರ್ತ್ ನಗರದವನು. ರಾಜಧಾನಿ ತ್ರಿಪೋಲಿಯಲ್ಲಿ ಗದ್ಧಾಫಿ ಕಂಪೌಂಡೆಂದರೆ ನಗರದೊಳಗೊಂದು ನಗರ , ಅಚ್ಚರಿ, ಅದ್ಭುತಗಳಲ್ಲಿ ಒಂದಾಗಿತ್ತು. In that compound there was an under ground secret city. ಅಲ್ಲಿ ಏನು ಸಿಗುತ್ತದೆಂದು ಕೇಳಬೇಡಿ, ಏನು ಸಿಗುವುದಿಲ್ಲವೆಂದು ಕೇಳಿ. ಜಗತ್ತಿನ ಐಶ್ಯಾರಾಮಗಳೆಲ್ಲ ಒಂದೇ ಸೂರಿನಡಿ ಲಭ್ಯವಿತ್ತು.

ಇವನು ಕಾಮುಕ. ವಿಕೃತ ಮನಸಿನವನು. 99% ನಾಗರಿಕರಿಗೆ ಇವನ ಒಂದು ಮುಖ ಮಾತ್ರ ಪರಿಚಿತ. ಇವನ ಅಕ್ಕ ಪಕ್ಕ ಮಹಿಳಾ ಬಾಡಿ ಗಾರ್ಡಗಳು. ಅವರನ್ನು ಸ್ವತಃ ನಿಯುಕ್ತಿ ಮಾಡುತ್ತಿದ್ದ. ಅವರೆಲ್ಲ ಅವನ ಭೋಗದ ವಸ್ತುಗಳು.

ಇವನು ಹಲವು ಸಮಾರಂಭಗಳಿಗೆ ಹೋದರೆ, ಶಾಲಾ-ಕಾಲೇಜು ಕಾರ್ಯಕ್ರಮಗಳಿಗೆ ಹಾಜರಾದಾಗ ಸ್ವಾಗತಿಸಲು ಬಂದ ಯುವತಿಯರು ಇಷ್ಟವಾದಲ್ಲಿ ಆಶಿರ್ವಾದದಂತೆ ಅವರ ತಲೆ ನೇವರಿಸುತ್ತಿದ್ದ. ಇದು ಅವನ ಸಂಕೇತ. ಸಂಕೇತವನ್ನರಿತ ಸಿಬ್ಬಂದಿಗಳು ಮಾರನೆಯದಿನ ಯುವತಿಯನ್ನು ವಿನಾಕಾರಣ ಎನೋ ನೆವ ಹೇಳಿ ಕರೆತರುತ್ತಿದ್ದರು. ( ಹಲವರ ಮಾತಿನಲ್ಲಿ, ಯುದ್ಧ ಪ್ರಾರಂಭವಾದ ನಂತರ ಕೆಲವರು ವಿವರಿಸಿದ್ದರು,  wrote a real life story about this in my book Panchalika   )

ಪ್ರಾರಂಭದ ಹಂತದಲ್ಲಿ ರಾತ್ರಿಯಲ್ಲಿ ಮಾತ್ರ ದಂಗೆ, ಜಗಳ ಕಾಣಿಸಿಕೊಳ್ಳುತ್ತಿತ್ತು. ಯಾವಾಗ    rebels    ಹತ್ತಿರ ಯುದ್ಧದ ಸಾಮಗ್ರಿಗಳು ಸಾಕಷ್ಟು ಶೇಖರಣೆಯಾದವೋ ಆಗ ಹಗಲಿನಲ್ಲಿಯೂ ಪ್ರಾರಂಭವಾಯಿತು.
ಮಾರ್ಚ್ 2011

ಭಾರತೀಯರೆಲ್ಲ ಲಿಬಿಯ ಬಿಟ್ಟು ಹೊರಟಿದ್ದರು...ಆಗಿನ ದೆಹಲಿ ನಗರದ ಜನಸಂಖ್ಯೆಯಷ್ಟು ಭಾರತೀಯರು ಲಿಬಿಯಾದಲ್ಲಿ ನೆಲೆಸಿದ್ದರು. ಭಾರತ ಸರಕಾರ   evacuation   ಗೆ ವ್ಯವಸ್ಥೆ ಮಾಡಿತ್ತು. ಮನಸ್ಸಿಲ್ಲದೆ ಹೊರಟವರು ನಾವೆಲ್ಲ. ನಮಗೆಲ್ಲ ಆಪ್ತವಾಗಿದ್ದ ನಾಡು, ಮರಳಿ ಬರುವ ಇಚ್ಛೆಯಿಂದ ಹೊರಟಿದ್ದೆವು. ಹೊರಡುವುದು ಅನಿವಾರ್ಯವಾಗಿತ್ತು. ಬೆಂಗಾಝಿಯಲ್ಲಿ ಬಾಂಬ್ ಧಾಳಿ ಪ್ರಾರಂಭವಾಗಿತ್ತು.

ನಾವೆಲ್ಲ ಹೊರಟೆವು ಆದರೆ ನಮ್ಮ ಜೊತೆಗಿದ್ದ ಇರಾನ್.,ಇರಾಕ್, ಈಜಿಪ್ಟ ದೇಶದ ಜನರ ಪರಿಸ್ಥಿತಿ ಶೋಚನೀಯ, ತಮ್ಮ ದೇಶದಿಂದ ಪಾಲಾಯನ ಮಾಡಿ ಲಿಬಿಯಾ ಸೇರಿದ್ದರು. ಮುಂದೆ ಏನೆನ್ನುವು ಪ್ರಶ್ನೆ ಬೃಹದಾಕಾರವಾಗಿ ನಿಂತಿತ್ತು.

ಯುದ್ಧ

ಬುಡಕಟ್ಟು ಜಾತಿ ಜನಾಂಗಳ ಮಧ್ಯೆ ತಿಕ್ಕಾಟ ನಡೆಯಿತ್ತಿರುವುದು ಸರ್ವೇಸಾಮಾನ್ಯವಾಗಿತ್ತು. ಲಿಬಿಯಾದ ಸರಕಾರ ದೇಶದ ಅಭಿವೃದ್ಧಿಗಾಗಿ, ಜನಸಾಮಾನ್ಯರ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನವನ್ನು ಮಾಡಿತ್ತು. ಜನರಿಗೆ ಇದರ ಅರಿವೂ ಇತ್ತು.   United Nations     ಹೇರಿದ sanctions  ಗಳನ್ನು ನಿಧಾನವಾಗಿ ಸರಿಪಡಿಸಿ, ದೇಶವನ್ನು ಉತ್ತಮ ಸ್ಥಿಯಲ್ಲಿಟ್ಟಿದ್ದ. ಸರಕಾರದಲ್ಲಿ ಸಮ್ಮಿಲಿತವಾದ ಬುಡಕಟ್ಟು ಜನಾಂಗದವರು ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ನಿಜವಾದರೂ ಉಳಿದವರು ಸಂತೃಪ್ತರೇ.

ಪ್ರಾರಂಭದಿಂದಲೇ ಉದ್ಭವವಾಗಿದ್ದ ಚಿಂಗಾರಿಗೆ ತುಪ್ಪ ಸುರಿದು ಜ್ವಾಲೆಯಾಗಿ ಮಾರ್ಪಡಲು 42 ( 1969 to 2011) ವರ್ಷಗಳು ಬೇಕಾದವೆ....? ಶಸ್ತಾಸ್ತ್ರಗಳಿಲ್ಲದ ವಿರೋಧಿಗಳಿಗೆ ಆಧುನಿಕ ಶಸ್ತಾಸ್ತ್ರ ಒದಗಿಸಿದವರಾರು.....? ಇದು ಅಲ್ಲಿಯ ಜನಸಾಮಾನ್ಯರಲ್ಲಿ ಎದ್ದ ಪ್ರಶ್ನೆಯಾಗಿತ್ತು. ಸರಕಾರದ ವಿರುದ್ಧ ಹೋರಾಡುವುದು ಸುಲಭವಾಗಿರಲಿಲ್ಲ. ಬಲಿಷ್ಠ ಸರಕಾರವನ್ನು ಉರುಳಿಸಲು ಸಜ್ಜಾದ ವಿರೋಧಿಗಳು ಹಲವಾರು ಸಾರಿ ಹಿಂದೆ ಸರಿದಿದ್ದರು. ಹಲವು ಕುತಂತ್ರದಿಂದ, ಬಲಿಷ್ಠ ರಾಷ್ಟ್ರಗಳ ಸಹಕಾರದಿಂದ ನಡೆದ ಯುದ್ಧ ಗದ್ಧಾಫಿಯ ಪತನಕ್ಕೆ, ಲಿಬಿಯಾದ ಪತನಕ್ಕೆ ಕಾರಣವಾಗಿದ್ದು ನಗ್ನ ಸತ್ಯ.

ಒಂದು ದೇಶವನ್ನು ಕಟ್ಟಿ ಬೆಳೆಸಲು ಶ್ರಮವೆಷ್ಟು ಬೇಕು...
ಜನರನ್ನು ಸಂತೃಪ್ತಗೊಳಿಸಲು ಶ್ರಮವೆಷ್ಟು ಬೇಕು....?
90%  ಜನರು ಸಂತೃಪ್ತರಾಗಿದ್ದರು.

ನಿರಪರಾಧಿ ಜನರು ಬಲಿಯಾಗಿದ್ದರು...

3 comments:

 1. ಲಿಬಿಯ ಹಾಗು ಗಢಾಫಿ ಬಗ್ಗೆ, ಅಲ್ಲಿನ ಆಗುಹೋಗುಗಳ ಚಿತ್ರಣ ಕಣ್ಣಿಗೆ ಕಟ್ಟುವಂತೆ ಸುಂದರವಾಗಿ ಬರೆದ್ದಿದ್ದೀರಿ. ವಾಣಿ...
  very good article .

  ReplyDelete
 2. Need details of d post war happenings, may be you are not a witness..Learnt that d Indians are most liked among d foreigners there & d locals are very friendly, enjoy HIndi movies & music etc;

  ReplyDelete
 3. Falsified notes on Gaddafi... observation is very superficial....and contradictory itself!

  ReplyDelete