ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Sunday 5 October 2014

" ತಮಸೋಮ ಜ್ಯೋತಿರ್ಗಮಯ....."

From Darkness to Light...

ಚಕ್ಷುಗಳ ತೀವ್ರತೆ, ಮೆದುಳಿನ ಕಾರ್ಯಶೀಲತೆ ತೀಕ್ಷ್ಣತೆಯನ್ನು ತಾಳಿದರೆ ಪ್ರತಿ ಕ್ಷಣವೂ ಅರಿವಿನೆಡೆಗೆ, ಗುರುವಿನ ಸನ್ನಿಧಿಯಲ್ಲಿ...
ದಾರಿಯ ಹೋಕನಿಂದ ಹಿಡಿದು ಪುಟ್ಟ ಕಂದಮ್ಮಗಳಿಂದಲೂ ಕಲಿಯುವ ಅಂಶವಿರುತ್ತದೆ. ಗ್ರಹಿಸುವ ಚಾಣಾಕ್ಷತನ ಇರಬೇಕಷ್ಟೆ.

ನಮ್ಮ ಪರಿಸರ ನಮಗರಿವಿಲ್ಲದ ಗುರು.
ಜನ್ಮತಾಳಿದಾಗಿನಿಂದ ಮನೆಯ ಪರಿಸರ, ಜನನಿ ನಮ್ಮೆಲ್ಲರ ಗುರು.
ಭಗವಂತ ಕೃಷ್ಣನಿಗೆ ಹೆತ್ತವಳು ದೇವಕಿಯಾದರೂ ತನ್ನ ಪರಿಸರದಲ್ಲಿ ಯಶೋಧೆಯನ್ನು ಮಾತೆಯಾಗಿ ಪಡೆದ, ಹೀಗಾಗಿ...

" ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು..."

ಭೀಮಸೇನ ಜೋಶಿಯವರು ಚಿಕ್ಕವರಿರುವಾಗ ಸಂಗೀತಾಭ್ಯಾಸಕ್ಕಾಗಿ ಗುರು ಪಂಡಿತ ಸವಾಯಿ ಗಂಧರ್ವವರ (ಕುಂದಗೋಳು) ಶಿಷ್ಯರಾಗಿ ಉಪದೇಶ ತಾಳಿದಾಗ, ೫ ವರ್ಷಗಳ ಪರ್ಯಂತ ಮನೆಯೊಳಗೆ ಪ್ರವೇಶವಿರಲಿಲ್ಲ. ಮನೆಚಾಕರಿ ಮಾಡಿಕೊಂಡಿದ್ದು ಗುರುವಿನ ಅನುಗ್ರಹಕ್ಕಾಗಿ ಕಾದು ಕುಳಿತಿದ್ದರು. ೫ ವರ್ಷದ ನಂತರ ಮನೆಯೊಳಗೆ ಪ್ರವೇಶ, ಸಂಗೀತಾಭ್ಯಾಸ ಪ್ರಾರಂಭ. ತಮ್ಮ ಛಲದಿಂದ, ಸಾಧನೆಯಿಂದ ಸರಸ್ವತಿಯನ್ನು ಕಂಠದಲ್ಲಿ ವೈಭೀಕರಿಸಿದ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು.
" ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..."

ಸಾಧನೆಯೆನ್ನುವುದು ನಮ್ಮೆಲ್ಲರೊಳಗೆ ಸುಪ್ತವಾಗಿ ಅಡಗಿರುವ ಇನ್ನೊಂದು ಗುರು.
ಇಲ್ಲಿ ಏಕಲವ್ಯನ ಸಾಧನೆಯನ್ನೂ ಸ್ಮರಿಸಬಹುದು.

" ತಮಸೋಮ ಜ್ಯೋತಿರ್ಗಮಯ....."
ಕತ್ತಲೆಯನ್ನು ಲಯಗೊಳಿಸಿ, ಜ್ಞಾನ ದೀವಿಗೆಯನ್ನು ಬೆಳಗಿಸಿ, ಜ್ಞಾನ ವೃದ್ಧಿಯಾಗಲು ನೆರವಾಗುವವನೇ ಗುರು.
ಪರೋಕ್ಷವಾಗಿ, ಅಪರೋಕ್ಷವಾಗಿ ಜ್ಞಾನವೃದ್ಧಿಗೆ ಸಹಾಯಕರಾದ ಬಂಧುಗಳಿಗೆಲ್ಲ ನನ್ನ ಸಾಷ್ಟಾಂಗ ಪ್ರಣಾಮಗಳು.

1 comment:

  1. ನನ್ನ ಮಟ್ಟಿಗೆ ನನ್ನ ಬದುಕನ್ನು ರೂಪಿಸಿದವರೆಲ್ಲ ನನಗೆ ಗುರುಗಳೇ.
    ಒಳ್ಳೆಯ ಗುರುವಂದನಾ ಬರಹ.

    ReplyDelete