ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Wednesday 8 October 2014

ನಾನು ನನ್ನ ಕಣ್ಣಾರೆ ನೋಡಿದ್ದು...ಕೇಳಿದ್ದು ಇದು ನನ್ನ ಅನುಭವದ ಕಥನ...A Libya Experience

Heart rending Encounters

ರಾತ್ರಿ ಗಂಟೆ ಹನ್ನೊಂದುವರೆ ಇನ್ನೂ ಆಗಿರಲಿಲ್ಲ. ಮಕ್ಕಳು ಮಲಗಿದ್ದರು. ನಾನು ಅಡುಗೆ ಮನೆಯಲ್ಲಿದ್ದೆ. ಹೊರಗೆ ಗಲಾಟೆ, ಪಟಾಕಿಯ ಸದ್ದು ಕೇಳಿಸಿಕೊಂಡಾಗ.. ಸ್ವಲ್ಪ ನೋಡಿ ಸಂದೀಪ್ ಎಂದೆ, ಯಾರದೋ ಮದುವೆಯ ಸಡಗರ ಜೊತೆಗೆ ಪಟಾಕಿ ಸದ್ದು ಸುಮ್ಮನಿರು ಎಂದರು ನನ್ನ ಪತಿದೇವರು. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ, ಪಟಾಕಿಯ ಸದ್ದಲ್ಲ, ಗುಂಡಿನ ಸದ್ದು, ಹೌದು ನಿರಂತರವಾಗಿ ಗುಂಡಿನ ಸುರಿಮಳೆthe rain of gunfire...        
ಮಕ್ಕಳು ಎದ್ದು ಕುಳಿತರು. ಮನೆಯ ಹೊರಗೆ ಕಿಟಕಿಯಿಂದ ದೃಷ್ಟಿಗೆ ಯಾರೂ ಏನೂ ನಿಲುಕಲಿಲ್ಲ.
ಮಕ್ಕಳನ್ನು ಕಾಲ ಮೇಲೆ ಮಲಗಿಸಿಕೊಂಡು ಕುಳಿತಲ್ಲೆ ರಾತ್ರಿ ಕಳೆದಿದ್ದೆವು. ರಾತ್ರಿ ಪೂರ್ಣ ಗುಂಡಿನ ಘರ್ಜನೆ. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಗುಂಡಿನ ಆರ್ಭಟ ನಿಂತಿತ್ತು.

ಫೋನ್, ಮೆಸೆಜ್, skype calls ಬರಲು ಪ್ರಾರಂಭವಾದವು. ಅಕ್ಕಪಕ್ಕದ ಜನರಿಂದ ಪರಿಚಯಸ್ಥರಿಂದ ಖಚಿತವಾಗಿದ್ದು Libyan revolution ಅಲೆಗಳು Benghazi ಯಿಂದ ಲಿಬಿಯಾದ ರಾಜಧಾನಿ ತ್ರಿಪೋಲಿಯನ್ನು ತಲುಪಿತ್ತು.

ರಾತ್ರಿ ನಡೆದ ಘಟನೆ ಭಯಾನಕ ಯಾರ ಊಹೆಗೆ ನಿಲುಕದ ವಿಷಯವಾಗಿತ್ತು. ರಾತ್ರಿಯಲ್ಲಿ ಸೈನಿಕರ ಸಾಮೂಹಿಕ ಹತ್ಯೆ ನಡೆದಿತ್ತು. ರಸ್ತೆಯಲ್ಲಿ- ಚರಂಡಿಯಲ್ಲಿ ರಕ್ತದ ನದಿ ಹರಿದಿತ್ತು. ಭಯಂಕರ ಚಳಿಯಲ್ಲಿ ನೀರಿನಂತೆ ರಕ್ತ...
ಗದ್ಧಾಫಿಯು ತನ್ನ ಸೈನಿಕರನ್ನು ಸಾಮೂಹಿಕವಾಗಿ ನಿರ್ಭಿಡೆಯಿಂದ ಸಾಯಿಸಿದ್ದ. ಸೈನಿಕರಿಗೆ ಗೋಲಿಬಾರು ನಡೆಸಿ, ಕಂಡವರಿಗೆ ಗುಂಡಿಕ್ಕಿ ಸಾಯಿಸೆಂದು ಆಜ್ನೆಯಿತ್ತಾಗ ತಮ್ಮ ಜನರನ್ನು ಕೊಲ್ಲಲು ಹಿಂಜರಿದ ಸೈನಿಕರು, ಯಾವ ಬೆದರಿಕೆಗೆ ಹೆದರದೆ ಖಡಾಖಂಡಿತವಾಗಿ ತಮ್ಮ ನಿರ್ಧಾರವನ್ನು ಮುಂದಿಟ್ಟ ಸೈನಿಕರ ಸಮೂಹವನ್ನೇ ಧ್ವಂಸಮಾಡಿದ್ದ.

ನನ್ನ ಅನುಭವದ ಹಿನ್ನೆಲೆ
2011-January

ನನ್ನ ಕುಟುಂಬ ಮತ್ತು ನಮ್ಮ ಸ್ನೇಹಿತರೆಲ್ಲ ಸೇರಿ Al-Bayda, Benghazi, Tobruk ಪ್ರವಾಸಕ್ಕೆ ಹೋಗಿದ್ದೆವು.ಇದು ಈಜಿಪ್ಟನ ಮತ್ತು ಲಿಬಿಯಾದ ಗಡಿ ಪ್ರದೇಶ. ತೊಬರುಕ    World War II ನಡೆದ ಸ್ಥಳ.








ಅಲಬೈದಾದಲ್ಲಿ ನಾವು Greek-Ruins ನೋಡುತ್ತಿದ್ದಾಗ ಎಲ್ಲೆಡೆ ಹೆಲಿಕಾಪ್ಟರ್ ತಿರುಗಾಡುತ್ತಿದ್ದವು. ನಾವೆಲ್ಲ ಹೆದರಿದ್ದೆವು. ಈಜಿಪ್ಟನಲ್ಲಿ ಯುದ್ಧ ಆಗಲೇ ಪ್ರಾರಂಭವಾಗಿತ್ತು. ನಮಗೆಲ್ಲ ಸಂಶಯ ಹುಟ್ಟಿದ್ದು ಅಲ್ಲಿಂದ. ಅದೇ ರಾತ್ರಿ ಹೊಟೆಲಿನ ಹೊರಗೆ ಗುಂಡಿನ ಸದ್ದು, ಮನುಷ್ಯ ಚೀರಿದ್ದು ಕೇಳಿಸಿತ್ತು. ಮಾರನೆಯ ದಿನ ಹೊಟೆಲಿನವ ಎರಡು ಜನರು ಗುಂಡೇಟಿಗೆ ಸತ್ತಿದ್ದಾರೆ ಎಂದಿದ್ದ. ಆಗಲೇ rebels ತಯಾರಿ ನಡೆದಿತ್ತು. Benghaziಯಿಂದ ಯುದ್ಧದ ಅಲೆಗಳು ಪ್ರಾರಂಭವಾಗಿದ್ದು. ಸಾಮಾನ್ಯ ಜನರಿಗೆ ಅರಿವಾಗಲಿಲ್ಲ. ಅಲ್ಲಿನ ಸರ್ಕಾರ ಮತ್ತು   rebels  ಗೆ ಮಾತ್ರ ವಿಷಯ ಗೊತ್ತಿತ್ತು.
Pictures of the beautiful Libyan countryside (Al-Bayda) on the Libya-Egypt border: -









ಕಾರಣಗಳು-ಕಾರಣೀಭೂತರು

ಲಿಬಿಯಾದಲ್ಲಿ ಬಡವರು ಇಲ್ಲ. ಇದ್ದರೂ ಊಟ-ತಿಂಡಿಗೆ ಕೊರತೆಯಿರಲಿಲ್ಲ. ಹಸಿವೆಯಿಂದ ಬಳಲುವ ಬಡತನ ಯಾರಿಗೂ ಇರಲಿಲ್ಲ.
ಅಲ್ಲಿ ಡಿಕ್ಟೇಟರಿ ಆಡಳಿತ ಚೀನಾದಂತೆ. ಗದ್ಧಾಫಿ ಸಮಸ್ತ ಅಧಿಕಾರ ಪಡೆಯುವ ಮುನ್ನ ಲಿಬಿಯಾದಲ್ಲಿ ರಾಜನ ಆಡಳಿತವಿತ್ತು. ರಾಜನನ್ನು ಅಧಿಕಾರದಿಂದ ತೆಗೆದು ತನ್ನ ಅಧಿಕಾರ ಸ್ಥಾಪಿಸಿದ್ದ ಗದ್ಧಾಫಿ. (Surprisingly that was a blood less coup)                                 
ರಾಜನ tribe ಬೇರೆ, ಗದ್ಧಾಫಿಯ tribe ಬೇರೆ. ಲಿಬಿಯಾದ ಯುದ್ಧಕ್ಕೆ   tribe  ಮುಖ್ಯವಾದ ಕಾರಣಗಳಲ್ಲಿ ಒಂದು.
Oil 
Libya is one of the major oil producing countries in the world.A few years ago,The Libyan Govt changed their policy to sell a major portion of their oil to European Union instead of US.
ತೈಲಕ್ಕಾಗಿ ಲಿಬಿಯಾದ ಸರಕಾರಕ್ಕೆ ಸಹಕರಿಸುತ್ತಿದ್ದ ಯು ಎಸ್ ನಿಧಾನವಾಗಿ   rebelsಗೆ ತನ್ನ ಸಹಕಾರ ನೀಡಲು ಪ್ರಾರಂಭಿಸಿತ್ತು.

To be continued…


1 comment:

  1. ಲಿಬಿಯಾ ಅನುಭವಗಳನ್ನು ಧಾರವಾಹಿಯಾಗಿ ಮುಂದಿಡುವ ನಿಮ್ಮ ಪ್ರಯತ್ನದ ಮೊದಲ ಅಧ್ಯಾಯವೇ ರಕ್ತಸಿಕ್ತವಾಗಿದೆ!

    ಗದ್ಧಾಫಿ ಕ್ರೌರ್ಯದ ಪರಮಾವಧಿಯ ನಾಯಕ! ಆತನ ಬಗ್ಗೆ ಬಹಳ ಕೇಳಿದ್ದೆ, ತುಸುವೇ ಓದಿದ್ದೆ. ನಿಮ್ಮ ಬರಹದ ಮೂಲಕ ಆತನ ಕರಾಳತೆಯ ಅಸಲಿಯತ್ತು ಮನವರಿಕೆಯಾಯಿತು.

    ಲಿಬಿಯಾದ ಅಂತರೀಕ ಗಲಬೆಗಳ ಹಿಂದೆ ಬುಡಕಟ್ಟು ರಾಜಕೀಯವಿದೆ ಎಂಬುದು ನಿಮ್ಮಿಂದಲೇ ಅರಿವಿಗೆ ಬಂದದ್ದು.

    ಮುಂದುವರೆಸಿರಿ...

    ReplyDelete